ಕಿಡ್ನಿ ವೈಫಲ್ಯದ ಲಕ್ಷಣಗಳು, ಕಾರಣಗಳು ಮತ್ತು ಹಂತಗಳು

 ಮೂತ್ರಪಿಂಡಗಳು ಮಾನವನ ದೇಹದಲ್ಲಿನ ಬಹಳ ಮುಖ್ಯವಾದ ಅಂಗವಾಗಿದೆ, ದೇಹದಲ್ಲಿನ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯಲು ಮೂತ್ರಪಿಂಡಗಳು ಸಾಕಷ್ಟು ಕೊಡುಗೆ ನೀಡುತ್ತವೆ. ಈಗಿನ ಜನರ ಜೀವನಶೈಲಿಯ ಬದಲಾಗುತ್ತಿರುವ ಪರಿಣಾಮಗಳ ದೃಷ್ಟಿಯಿಂದ, ಜನರಿಗೆ ಮೊದಲಿಗಿಂತ ಹೆಚ್ಚು ಮೂತ್ರಪಿಂಡದ ತೊಂದರೆಗಳು ಕಾಣಿಸಲು ಪ್ರಾರಂಭವಾಗಿದೆ.ಆದುದರಿಂದ ಅಂತಹ ಜನರು ತಿಳಿದುಕೊಳಬೇಕಾದ ವಿಷಯಗಳೆಂದರೆ, ಕಿಡ್ನಿ ವೈಫಲ್ಯದ ಲಕ್ಷಣಗಳಾವವು, ಕಾರಣಗಳಾವವು ಮತ್ತು ಹಂತಗಳು ಯಾವುವು ಎಂದು.

      ಆ ಸಮಸ್ಯೆಗಳು ಪ್ರಾರಂಭವಾಗುವ ಮೊದಲೇ ಅದನ್ನು ನೀವು ಗುರುತಿಸಿದರೆ, ಅವುಗಳನ್ನು ಎದುರಿಸುವುದು ಸುಲಭವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಮೂತ್ರಪಿಂಡ ವೈಫಲ್ಯದ ಬಗ್ಗೆ ಯಾವುದೇ ಸಂದೇಹ ಅಥವಾ ಅನುಮಾನವಿದ್ದರೆ, ಅವರು ಈ ಲೇಖನದ ಮೂಲಕ ದೂರ ಮಾಡಿಕೊಳಬಹುದು .

     ಮೂತ್ರಪಿಂಡಗಳ ವೈಫಲ್ಯವನ್ನು ಸಾಮಾನ್ಯವಾಗಿ ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ – ತೀವ್ರ ಮೂತ್ರಪಿಂಡದ ಗಾಯ (AKI) ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, CKD. ಯಾವುದೇ ಮೂತ್ರಪಿಂಡದ ವೈಫಲ್ಯಗಳು ಇವುಗಳ ವ್ಯಾಪ್ತಿಗೆ ಬರುತ್ತವೆ. ಏನಾಗುತ್ತದೆ ಈ  ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯ (AKI) ಮತ್ತು ದೀರ್ಘಕಾಲೀನ ಮೂತ್ರಪಿಂಡ ವೈಫಲ್ಯ (CKD) ಗಳಲ್ಲಿ ಎಂದು ತಿಳಿಯೋಣ ಬನ್ನಿ .

 ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯ ( Acute kidney injury “AKI”) 

         ಇದರಲ್ಲಿ ಮೂತ್ರಪಿಂಡದ ತೊಂದರೆ ಕೆಲವು ನಿರ್ದಿಷ್ಟ ಸಮಯ ಅಥವಾ ನಿರ್ದಿಷ್ಟ ದಿನಗಳು ಮಾತ್ರ ಇರುತ್ತದೆ. ಹಾಗಾಗಿ ಆ ನಿರ್ದಿಷ್ಟ ಸಮಯದಲ್ಲಿ ಮೂತ್ರಪಿಂಡವು ನಮ್ಮ ರಕ್ತದಲ್ಲಿನ ತ್ಯಾಜ್ಯ ಪದಾರ್ತಗಳನ್ನು ಹೊರಹಾಕುವುದಾಗಲಿ ಅಥವಾ ನಮ್ಮ ದೇಹದಲ್ಲಿನ ನೀರಿನ ಪ್ರಮಾಣ ಸಮತೋಲನದಲ್ಲಿ ಇಡುವ ಕೆಲಸ ಮಾಡುವುದಿಲ್ಲ. ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯದ ಪ್ರಮುಖ ಕಾರಣಗಳೆಂದರೆ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ, ಯಾವುದೇ ಗಂಬೀರವಾದ ಟ್ರೀಟ್ಮೆಂಟ್ ಅಥವಾ ತಲೆನೋವು, ಫ್ಲೂ, ಬೇರೆ ಯಾವುದೇ ರೀತಿಯ ನೋವು ನಿವಾರಿಸಲು ನೋವುನಿವಾರಕ (pain killers) ಮಾತ್ರೆಗಳನ್ನು ತೆಗೆದುಕೊಳ್ಳುವುದು ಉದಾರಣೆಗೆ ಐಬುಪ್ರೊಫೇನ್, ಕೆಟೊಪ್ರೊಫೇನ್ ಮತ್ತು ನ್ಯಾಪ್ರೊಕ್ಸೆನ್, ಮತ್ತು ಹೃದಯಾಘಾತ, ಯಕೃತ್ತು ವೈಫಲ್ಯ, ರಕ್ತ ಅಥವಾ ನೀರಿನ ಪ್ರಮಾಣದಲ್ಲಿ ನಷ್ಟ, ಕಡಿಮೆ ರಕ್ತದೊತ್ತಡ (ಹೈಪೊಟೆನ್ಷನ್) ಅಥವಾ ಯಾವುದೇ ರೀತಿಯ ಆಘಾತ.  

       ಅಲ್ಪಾವಧಿಯ ಮೂತ್ರಪಿಂಡ ವೈಫಲ್ಯದ ಲಕ್ಷಣಗಳು (ಎಕೆಐ) ಜನರಲ್ಲಿ ಬೇರೆ ಬೇರೆ ಯಾಗಿರಬಹುದು, ಆದರೆ ಕೆಲವು ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತ್ತಿವೆ:-

 •         ಕಡಿಮೆ ಮೂತ್ರ ವಿಸರ್ಜನೆ.
 •         ಪಾದಗಳು ಮತ್ತು ದೇಹದ ಇತರ ಭಾಗಗಳ ಊತ.
 •         ಆಯಾಸ.
 •         ಮೂತ್ರಪಿಂಡದ ಕಾರ್ಯ ಕಡಿಮೆಯಾದ ಕಾರಣ ದೇಹದಲ್ಲಿ ಆಮ್ಲ ಲೋಡ್ ಹೆಚ್ಚಾಗಿದೆ.
 •         ರಕ್ತದಲ್ಲಿ ಪೊಟ್ಯಾಸಿಯಮ್ ಅಧಿಕ ವಾಗುವುದು .
 •         ಶ್ವಾಸಕೋಶದಲ್ಲಿ ನೀರು ತುಂಬುವುದು.
 •        ಉಸಿರಾಟದ ತೊಂದರೆ.
 •   ಇದಲ್ಲದೆ, ಈ ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ಕೋಮಾ ದಂತಹ ಸ್ಥಿತಿಯೂ ಉಂಟಾಬಹುದು.

ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ( Chronic kidney disease, CKD)

(ಸಿಕೆಡಿ) ಯನ್ನು  ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ರೋಗವು ಅದರ ರೋಗಲಕ್ಷಣಗಳನ್ನು ಬೇಗನೆ ತೋರಿಸುವುದಿಲ್ಲ. ಮೂತ್ರಪಿಂಡಗಳು ಸುಮಾರು 70 ರಿಂದ 80 ಪ್ರತಿಶತದಷ್ಟು ಹಾಳಾದಾಗ ರೋಗಲಕ್ಷಣಗಳು ತೋರಿಸುತ್ತದೆ. (ಸಿಕೆಡಿ) ಮೂತ್ರಪಿಂಡ ವೈಫಲ್ಯದ ಪ್ರಕ್ರಿಯೆಯು ತುಂಬಾ ನಿಧಾನವಾಗಿರುತ್ತದೆ, ಇದು ತಿಂಗಳುಗಳು ಅಥವಾ ವರ್ಷಗಳವರೆಗೆ ಇರುತ್ತದೆ. ಮೂತ್ರಪಿಂಡದಲ್ಲಿ ಮುಖ್ಯವಾಗಿ ಇ ಜಿಎಫ್ಆರ್ (ಗ್ಲೋಮೆರುಲರ್ ಫಿಲ್ಟ್ರೇಶನ್ ರೇಟ್)  ಮತ್ತು ಕ್ರಿಯಾಟಿನೈನ್ ದರವನ್ನು ಅಳೆಯುವ ಮೂಲಕ, ವೈದ್ಯರು ಮೂತ್ರಪಿಂಡದ ವೈಫಲ್ಯದ ಹಂತವನ್ನು ನಿರ್ಧರಿಸುತ್ತಾರೆ. ಈ ಸ್ಥಿತಿಯಲ್ಲಿ, ವೈದ್ಯರು ನಿಮ್ಮ ವಯಸ್ಸು ಮತ್ತು ನಿಮ್ಮ ದೇಹದ ಗಾತ್ರ, ಲಿಂಗಕ್ಕೆ ಮತ್ತು ರಕ್ತದಲ್ಲಿ ಕ್ರಿಯಾಟಿನೈನ್ ದರದ  ಅನುಗುಣವಾಗಿ ಇ ಜಿಎಫ್ಆರ್ ಲೆಕ್ಕಹಾಕುತ್ತಾರೆ. ಮೂತ್ರಪಿಂಡ ವೈಫಲ್ಯದ ತಕ್ಷಣದ ಹಂತದ ಬಗ್ಗೆ ಇಜಿಎಫ್ಆರ್ ವೈದ್ಯರಿಗೆ ತಿಳಿಸುತ್ತದೆ, ಇದು ಚಿಕಿತ್ಸೆಯನ್ನು ಯೋಜಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ.

  ಮೂತ್ರಪಿಂಡ ವೈಫಲ್ಯದ ಈ ಪ್ರಕ್ರಿಯೆಯನ್ನು ಐದು ಹಂತಗಳಾಗಿ ವಿಂಗಡಿಸಲಾಗಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 300,000 ಜನರು ಕೊನೆಯ ಹಂತದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಅದರಲ್ಲಿ ಸುಮಾರು ೮೦% ಜನರು ಒಂದು ವರ್ಷದಲ್ಲೇ ತೀರಿಕೊಳುತ್ತಾರೆ ಮತ್ತು ಕೇವಲ ೧೦-೧೫% ಜನರು ಮಾತ್ರ ಡಯಾಲಿಸಿಸ್ (ಇದು ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆಯಾಗಿದೆ) ಮಾಡಿಸಿಕೊಳ್ಳುತ್ತಾರೆ. 

CKD ಹಂತ ಒಂದು.

ಮೊದಲ ಹಂತದಲ್ಲಿ ಮೂತ್ರಪಿಂಡದ ಕಾರ್ಯಕ್ಷಮತೆ 90 – 100% ಇರುತ್ತದೆ. ಈ ಹಂತದಲ್ಲಿ ಇಜಿಎಫ್ಆರ್ ನಿಮಿಷಕ್ಕೆ  90 ಮಿಲಿ. ಗಿಂತ ಹೆಚ್ಚು ಇರುತ್ತದೆ. ಈ ಹಂತದಲ್ಲಿ ರೋಗಿಯು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಸಾಮಾನ್ಯವಾಗಿ  ಮೂತ್ರದಲ್ಲಿ ಪ್ರೋಟೀನ್‌ನಂತಹ ಅಸಹಜತೆಗಳು ಕಂಡುಬರುತ್ತದೆ. ಸಿಕೆಡಿಯ ಈ ಹಂತವನ್ನು ಎಕ್ಸ್ ರೇ, ಎಂಆರ್‌ಐ, ಸಿಟಿ ಸ್ಕ್ಯಾನ್ ಅಥವಾ ಸೋನೋಗ್ರಫಿಯಂತಹ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡಬಹುದು. 

CKD ಎರಡನೇ ಹಂತ

ಈ ಹಂತದಲ್ಲಿ ಇಜಿಎಫ್‌ಆರ್ ನಿಮಿಷಕ್ಕೆ 60 ರಿಂದ 89 ಮಿಲಿ ಇರುತ್ತದೆ.  ಈ ಹಂತದ ರೋಗಿಗಳು ಸಾಮಾನ್ಯವಾಗಿ ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ, ಆದಾಗ್ಯೂ ಕೆಲವು ರೋಗಿಗಳು ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ ಅಥವಾ ಅಧಿಕ ರಕ್ತದೊತ್ತಡದಂತಹ ಲಕ್ಷಣಗಳನ್ನು ಅನುಭವಿಸಬಹುದು. ಮೂತ್ರದಲ್ಲಿ ಪ್ರೋಟೀನ್ ಅಥವಾ ರಕ್ತ ಪರೀಕ್ಷೆಯಲ್ಲಿ ಅಲ್ಪ ಪ್ರಮಾಣದ ಸೀರಮ್ ಕ್ರಿಯೇಟಿನೈನ್ ಹೆಚ್ಚಾಗಿ ಇರಬಹುದು.

CKD ಮೂರನೇ ಹಂತ 

ಈ ಹಂತದಲ್ಲಿ, ಇಜಿಎಫ್ಆರ್ ನಿಮಿಷಕ್ಕೆ 30 ರಿಂದ 59 ಮಿಲಿ ಇರುತ್ತದೆ. ಈ ಹಂತದ ಲಕ್ಷಣಗಳು ಎರಡನೆಯ ಹಂತದಂತೆಯೇ ಇರುತ್ತವೆ.ಈ ಹಂತದ ಪರೀಕ್ಷೆಯಲ್ಲಿ ಮೂತ್ರದಲ್ಲಿ ಅಸಹಜತೆಗಳು ಅಥವಾ ರಕ್ತ ಪರೀಕ್ಷೆಯಲ್ಲಿ ಅಲ್ಪ ಪ್ರಮಾಣದ ಸೀರಮ್ ಕ್ರಿಯೇಟಿನೈನ್ ಹೆಚ್ಚಾಗಿ ಕೊಂಡುಬರಬಹುದು.

CKD ನಾಲ್ಕನೇ ಹಂತ

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ನಾಲ್ಕನೇ ಹಂತದಲ್ಲಿ ಇಜಿಎಫ್ಆರ್ ನಿಮಿಷಕ್ಕೆ 15 ರಿಂದ 29 ಮಿಲಿಲೀಟರ್ ಇರುತ್ತದೆ. ಈ ಹಂತದಲ್ಲಿ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಈ ಲಕ್ಷಣಗಳು ಕೆಲವೊಮ್ಮೆ ತೀಕ್ಷ್ಣವಾಗಿರುತ್ತವೆ. ಈ ಹಂತದ ಲಕ್ಷಣಗಳು ಮೂತ್ರಪಿಂಡ ವೈಫಲ್ಯ ಮತ್ತು ಅದಕ್ಕೆ ಸಂಬಂಧಿಸಿದ ರೋಗವನ್ನು ಅವಲಂಬಿಸಿರುತ್ತದೆ.

CKD ಐದನೇ ಹಂತ

ಸಾಮಾನ್ಯವಾದ ಐದನೇ ಹಂತದ ರೋಗಲಕ್ಷಣಗಳು:-

CKDಯ ಐದನೇ ಹಂತವು ತುಂಬಾ ತೀವ್ರವಾಗಿರುತ್ತದೆ, ಈ ಹಂತವನ್ನು ಎಂಡ್ ಸ್ಟೇಜ್ ಕಿಡ್ನಿ ಡಿಸೀಸ್ ಎಂದೂ ಕರೆಯುತ್ತಾರೆ. ಇದರಲ್ಲಿ  ಇಜಿಎಫ್ಆರ್ ನಿಮಿಷಕ್ಕೆ 15 ಮಿಲಿ ಗಿಂತ ಕಡಿಮೆ ಹೊಂದಿರುತ್ತದೆ. ಇದನ್ನು ಸಿಕೆಡಿಯ ಕೊನೆಯ ಹಂತ (ದೀರ್ಘಕಾಲದ ಮೂತ್ರಪಿಂಡ ಕಾಯಿಲೆ) ಎಂದೂ ಕರೆಯಬಹುದು. ಇದು ಮೂತ್ರಪಿಂಡ ವೈಫಲ್ಯದ ಹಂತವಾಗಿದ್ದು, ಇದರಲ್ಲಿ ರೋಗಿಗೆ ಡಯಾಲಿಸಿಸ್(DIALYSIS) ಅಥವಾ ಮೂತ್ರಪಿಂಡ ಕಸಿ(KIDNEY TRANSPLANT) ಅಗತ್ಯವಿರುತ್ತದೆ. ಈ ಹಂತದಲ್ಲಿ ರೋಗಲಕ್ಷಣಗಳು ಸ್ಪಷ್ಟ ಮತ್ತು ತೀಕ್ಷ್ಣವಾಗಿ ಗೋಚರಿಸುತ್ತವೆ, ಕೊನೆಯ ಹಂತದ ಲಕ್ಷಣಗಳು ಜನರಿಂದ ಜನರಿಗೆ ಬದಲಾಗಬಹುದು.

 • ಹೊಟ್ಟೆ ಹಸಿಯದಿರದು, ವಾಂತಿ, ವಾಕರಿಕೆ ಬರುವುದು. 
 • ನಿರಂತರ ದೌರ್ಬಲ್ಯ, ತೂಕ ಕಡಿಮೆ ಯಾಗುವುದು. 
 • ಅನಾರೋಗ್ಯದಿಂದಾಗಿ ಇಡೀ ದೇಹದಲ್ಲಿ ಉತ(edema) ಹೆಚ್ಚಾಗುತ್ತದೆ ಅದರಿಂದ ತೂಕ ಹೆಚ್ಚಾಗುವುದು.
 • ಬೆಳಿಗ್ಗೆ ಎದ್ದ ನಂತರ ಕಣ್ಣು ಮತ್ತು ಮುಖದ ಸುತ್ತಲೂ ಉತ.
 • ಆಯಾಸ , ಉಸಿರಾಟದ ತೊಂದರೆ.
 • ರಕ್ತಸ್ರಾವ ಮತ್ತು ರಕ್ತಹೀನತೆ.
 • ದೇಹದ ತುರಿಕೆ.
 • ಬೆನ್ನು ನೋವು.
 • ರಾತ್ರಿಯಲ್ಲಿ ಅತಿಯಾದ ಮೂತ್ರ ವಿಸರ್ಜನೆ (Nocturia)
 • ಮೆಮೊರಿ ನಷ್ಟ, ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ.
 • ಮಾತ್ರೆಗಳ ಹೊರತಾಗಿಯೂ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಾರದಿರುವುದು. 
 • ಮಹಿಳೆಯರ ಮುಟ್ಟಿನ ಚಕ್ರದಲ್ಲಿ  ಮತ್ತು ಪುರುಷರಲ್ಲಿ ದುರ್ಬಲತೆ ಕಾಣಬಹುದು.  
 • ಮೂತ್ರಪಿಂಡದಲ್ಲಿ ತಯಾರಿಸಲ್ಪಡುವ  ವಿಟಮಿನ್ ‘ಡಿ’ ಕೊರತೆ ಉಂಟಾಗುತ್ತದೆ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. 

ಕಿಡ್ನಿ ವೈಫಲ್ಯದ ಲಕ್ಷಣಗಳು

ಮೂತ್ರಪಿಂಡವು ದೇಹದ ಒಂದು ಬಲವಾದ ಅಂಗವಾಗಿದ್ದು ,ಅದು ಶೇಕಡಾ 70 ರಿಂದ 80 ಪ್ರತಿಶತದಷ್ಟು ಕೆಲಸ ಮಾಡುವುದನ್ನು ನಿಲ್ಲಿಸುವವರೆಗೆ ನಮಗೆ ಗೊತ್ತೆಯಾಗುವುದಿಲ್ಲ .ಕೆಲವಂದು ಲಕ್ಷಣಗಳು ಕಂಡುಬಂದರೂ ಅದನ್ನು ನಾವು ಸಾಮಾನ್ಯವೆಂದು ನಿರ್ಲಕ್ಷಿಸುತ್ತೇವೆ.ಮೂತ್ರಪಿಂಡ ವೈಫಲ್ಯದ ಮೊದಲು ನಮಗೆ ಕೆಲವಂದು ಲಕ್ಷಣಗಳು ತೋರಿಸುತ್ತದೆ ಅದನ್ನು ನಾವು ನಿರ್ಲಕ್ಷಿಸದೆ ಅದಕ್ಕೆ ಬೇಕಾದ ರಕ್ತ ಪರೀಕ್ಷೆ ಅಥವಾ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಕಿಡ್ನಿ ವೈಫಲ್ಯದ ಲಕ್ಷಣಗಳು ಯಾವುವು ಎಂದು ತಿಳಿಯಿರಿ

ಅನೀಮಿಯಾ ಮತ್ತು ದೌರ್ಬಲ್ಯ

ಆಯಾಸ ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣ ಮತ್ತು ದೇಹದ ಬಣ್ಣ ಹಳದಿ ಯಾಗುವುದು. ರಕ್ತಹೀನತೆಯು ಚಿಕಿತ್ಸೆಯಿಂದ ಗುಣಮುಖವಾಗದಿದ್ದರೆ , ಅದು ಮೂತ್ರಪಿಂಡದ ವೈಫಲ್ಯದ ಸಂಕೇತವಾಗಿರಬಹುದು.

ಮುಖ ಮತ್ತು ದೇಹದ ಮೇಲೆ ಉತ(edema)

ಮುಖ, ಹೊಟ್ಟೆ ಮತ್ತು ಕಾಲುಗಳಲ್ಲಿ ಉತವು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿದೆ. ಆದರೆ ಉತವು ಮೂತ್ರಪಿಂಡದ ವೈಫಲ್ಯದ ಸಂಕೇತವಷ್ಟೇ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ರೋಗಿಗಳಲ್ಲಿ ಊತದ ಕಾರಣಗಳು ಬೇರೆ ಬೇರೆಯು ಯಾಗಿರುತ್ತದೆ.  

ಹಸಿವು ಕಡಿಮೆಯಾಗುವುದು, ವಾಂತಿ

ಹಸಿವು ಕಡಿಮೆಯಾಗುವುದು, ವಾಕರಿಕೆ, ವಾಂತಿ, ಬಾಯಿಯ ರುಚಿಯಲ್ಲಿ ಬದಲಾವಣೆ ಇತ್ಯಾದಿ ಮೂತ್ರಪಿಂಡದ ವೈಫಲ್ಯದ ಸಾಮಾನ್ಯ ಲಕ್ಷಣಗಳಾಗಿವೆ. ಮೂತ್ರಪಿಂಡದ ಕಾರ್ಯಕ್ಷಮತೆಯಲ್ಲಿನ ಇಳಿಕೆಯಿಂದಾಗಿ, ದೇಹದಲ್ಲಿನ ತ್ಯಾಜ್ಯ ಪದಾರ್ತಗಳ ಪ್ರಮಾಣವು ಹೆಚ್ಚಾಗುತ್ತದೆ ಈ ಕಾರಣದಿಂದ ವಾಕರಿಕೆ, ವಾಂತಿ, ಮತ್ತು ರೋಗಿಗೆ ಭಿಕ್ಕಳಿಕೆ ಸಹ ಬರಬಹುದು.

ಅಧಿಕ ರಕ್ತದೊತ್ತಡ

ಮೂತ್ರಪಿಂಡದ ವೈಫಲ್ಯದಿಂದಾಗಿ ಅಧಿಕ ರಕ್ತದೊತ್ತಡವು ರೋಗಿಯ ಸಾಮಾನ್ಯ ಲಕ್ಷಣವಾಗಿದೆ. ಅಧಿಕ ರಕ್ತದೊತ್ತಡವು 30 ವರ್ಷಕ್ಕಿಂತ ಕಡಿಮೆಯಿದ್ದರೆ ಅಥವಾ ಯಾವುದೇ ವಯಸ್ಸಿನಲ್ಲಿ ರಕ್ತದೊತ್ತಡ ಅಧಿಕವಾಗಿದ್ದರೆ, ಅದು ಮೂತ್ರಪಿಂಡದ ಕಾಯಿಲೆಯಿಂದಾಗಿರಬಹುದು.

ಮೂತ್ರದ ಬದಲಾವಣೆಗಳು

ಮೂತ್ರಪಿಂಡದ ಬದಲಾವಣೆಗಳು ಮೊದಲ ಮೂತ್ರದಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ಮೂತ್ರದ ಬಣ್ಣದಲ್ಲಿನ ಬದಲಾವಣೆ, ಕಡಿಮೆ ಪ್ರಮಾಣದ ತ್ರ , ಅತಿಯಾದ ಮೂತ್ರ ವಿಸರ್ಜನೆ, ಉರಿಮೂತ್ರ , ರಕ್ತಸ್ರಾವ ಅಥವಾ ಮೂತ್ರದಲ್ಲಿ ಕೀವು ಬರುವುದು ಮತ್ತು ತೀವ್ರ ಸ್ಥಿತಿಯಲ್ಲಿ ಮೂತ್ರ ಸಂಪೂರ್ಣವಾಗಿ ನಿಂತು ಹೋಗುತ್ತದೆ.

ಇತರ ಲಕ್ಷಣಗಳು

ಮೇಲೆ ತಿಳಿಸಿದ ರೋಗಲಕ್ಷಣಗಳ ಜೊತೆಗೆ, ರೋಗಿಗಳಲ್ಲಿ ಇನ್ನೂ ಅನೇಕ ಲಕ್ಷಣಗಳು ಕಂಡುಬರುತ್ತವೆ – ಕೆಳಗಿನ ಬೆನ್ನು ನೋವು, ಕಾಲು ಸೆಳೆತ, ದೇಹದ ನೋವು, ಶ್ವಾಸಕೋಶದ ನೀರು ತುಂಬಿಕೊಳ್ಳುವುದು, ಉಸಿರಾಟದ ತೊಂದರೆ, ಹೃದಯದ ಮತ್ತು ಮೆದುಳು ಸಂಭಂದಿತ ತೊಂದರೆಗಳು ಮತ್ತು ಇತ್ಯಾದಿಗಳು.

ಮೂತ್ರಪಿಂಡ ವೈಫಲ್ಯ(kidney failure)

ಇಂದಿನ ಬದಲಾಗುತ್ತಿರುವ ಜೀವನಶೈಲಿ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ತಂದಿದೆ, ಆದರೆ ನಮ್ಮ ದೇಹ ಮತ್ತು ಮೂತ್ರಪಿಂಡಗಳು ಸಹ ಈ ಜೀವನಶೈಲಿಯಿಂದ ಪ್ರಭಾವಿತವಾಗಿವೆ. ಇಂದಿನ ಸಂದರ್ಭದಲ್ಲಿ ಮೂತ್ರಪಿಂಡ ವೈಫಲ್ಯವನ್ನು ಹೆಚ್ಚು ನೋಡಲಾಗುತ್ತಿದೆ.

ಕಿಡ್ನಿ ವೈಫಲ್ಯಕ್ಕೆ ಹಲವು ಕಾರಣಗಳು-

 • ಮಧುಮೇಹ ಮತ್ತು ಅಧಿಕ ರಕ್ತದೊತ್ತಡವೂ ಮೂತ್ರಪಿಂಡ ವೈಫಲ್ಯಕ್ಕೆ ಮುಖ್ಯ ಕಾರಣಗಳಾಗಿವೆ.
 • ರಕ್ತವು ಮೂತ್ರಪಿಂಡವನ್ನು ತಲುಪುವುದು ಇದ್ದಕ್ಕಿದ್ದಂತೆ ನಿಂತರೆ ಅಥವಾ ಕಡಿಮೆಯಾದರೆ ಮೂತ್ರಪಿಂಡ   ವೈಫಲ್ಯದ ಅಪಾಯ ಹೆಚ್ಚಾಗುತ್ತದೆ. ಕಡಿಮೆ ರಕ್ತ ಪರಿಚಲನೆಯ ಪರಿಸ್ಥಿತಿಗಳು ಹೃದಯಾಘಾತ, ಹೃದಯ ಕಾಯಿಲೆ, ಪಿತ್ತಜನಕಾಂಗದ ವೈಫಲ್ಯ, ನೀರಿನ ಕೊರತೆ, ಸೆಪ್ಸಿಸ್ ನಂತಹ ಗಂಭೀರ ಸೋಂಕು ಮತ್ತು ಅಧಿಕ ರಕ್ತದೊತ್ತಡ.
 • ಮೂತ್ರದ ತೊಂದರೆಗಳು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವೆಂದು ವರದಿಯಾಗಿದೆ. ನಮ್ಮ ದೇಹದಿಂದ ಮೂತ್ರ ವಿಸರ್ಜಿಸಲು ಸಾಧ್ಯವಾಗದಿದ್ದಾಗ, ಅನೇಕ ಸಂಗತಿಗಳು ಮೂತ್ರಪಿಂಡಗಳಿಗೆ ಒತ್ತು ನೀಡುತ್ತವೆ. ಕೆಲವೊಮ್ಮೆ ಈ ಒತ್ತು ಮೂತ್ರನಾಳ ಮತ್ತು ಇತರ ಅಂಗಗಳಾದ ಪ್ರಾಸ್ಟೇಟ್ (ಪುರುಷರಲ್ಲಿ ಸಾಮಾನ್ಯ ಕರಣ) ನಿಂದಾಗಿರುತ್ತದೆ. 
 • ಇದಲ್ಲದೆ ಇತರ ಪರಿಸ್ಥಿತಿಗಳು ಮೂತ್ರ ವಿಸರ್ಜನೆಯ ಅಡಚಣೆಗೆ ಕಾರಣವಾಗಬಹುದು, ಇದು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು – ಕಲ್ಲುಗಳು, ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ, ಮೂತ್ರನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಮೂತ್ರ ಸೋಂಕು ತೀವ್ರವಾದಾಗ
 • ಹೃದಯ, ಶ್ವಾಸಕೋಶ, ಮೂತ್ರಪಿಂಡ ಮತ್ತು ಮೆದುಳಿನಂತಹ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುವ ಸ್ವಯಂ ನಿರೋಧಕ ಕಾಯಿಲೆಯಾದ ಲೂಪಸ್. ಇದು ಮೂತ್ರಪಿಂಡದಲ್ಲಿ ಉತಕ್ಕೆ ಕಾರಣವಾಗಬಹುದು, ಮತ್ತು ಮೂತ್ರಪಿಂಡದ ವೈಫಲ್ಯದ ಕಾರಣವಾಗಬಹುದು.
 • ಮಲ್ಟಿಪಲ್ ಮೈಲೋಮಾ (ಮೂಳೆ ಮಜ್ಜೆಯಲ್ಲಿರುವ ಪ್ಲಾಸ್ಮಾ ಕೋಶಗಳ ಕ್ಯಾನ್ಸರ್) ನಂತಹ ರೋಗಗಳು ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು.
 • ಕೀಮೋಥೆರಪಿ (ಕ್ಯಾನ್ಸರ್ ಮತ್ತು ಕೆಲವು ಸ್ವಯಂ ನಿರೋಧಕ ಕಾಯಿಲೆಗಳಿಗೆ ಚಿಕಿತ್ಸೆ) ನಂತಹ ಚಿಕಿತ್ಸಾ ವ್ಯವಸ್ಥೆಗಳು ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

ಕಿಡ್ನಿ ವೈಫಲ್ಯದ ಪರಿಹಾರ ಹೇಗೆ ಎಂದು ತಿಳಿಯಲು ನಮ್ಮ ಇನ್ನೊಂದು ಲೇಖನ ಓದಿ ತಿಳಿಯಿರಿ : ಕಿಡ್ನಿ ವೈಫಲ್ಯದ ಪರಿಹಾರ

Leave a Comment

VIDEO CONSULTATION with Dr.Prashant (Fees Rs.1000)BOOK a video consultation
+ +